ಉಚಿತ ಕೀಲು ಮತ್ತು ಮೂಳೆರೋಗ ತಪಾಸಣಾ ಶಿಬಿರ
ಉಚಿತ ಕೀಲು ಮತ್ತು ಮೂಳೆರೋಗ ತಪಾಸಣಾ ಶಿಬಿರ
ರೋಟರಿ ಕ್ಲಬ್ ಮೂಡುಬಿದಿರೆ ವತಿಯಿಂದ ಸೌಹಾರ್ದ ಫ್ರೆಂಡ್ಸ್ ಕ್ಲಬ್ ಶಿರ್ತಾಡಿ ಹಾಗೂ ಮಂಗಳೂರು ಮುಕ್ಕದ ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಮತ್ತು ಶಿರ್ತಾಡಿ ಘಟಕ ಇವರ ಸಹಯೋಗದಲ್ಲಿ ಉಚಿತ ಕೀಲು ಮತ್ತು ಮೂಳೆರೋಗ ತಪಾಸಣಾ ಶಿಬಿರವು ಗ್ರಾಮ ಪಂಚಾಯತ್ ಶಿರ್ತಾಡಿ ಸಭಾಂಗಣದಲ್ಲಿ ನಡೆಯಿತು. ಉದ್ಘಾಟನಾ ಸಮಾರಂಭದಲ್ಲಿ ಶಿರ್ತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರು, ರೋಟರಿ ಕ್ಲಬ್ ಮೂಡಬಿದಿರೆ ಅಧ್ಯಕ್ಷರು, ಐ.ಸಿ.ವೈ. ಎಮ್. ಸಚೇತಕರು, ಆಯೋಜಕರು, ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು. ಶ್ರೀ ಜೈಸನ್ ಪಿರೇರಾ ಕಾರ್ಯಕ್ರಮ ನಿರೂಪಿಸಿದರು.
ಡಾ. ಶಶಿರಾಜ್ ಕೆ. ಶೆಟ್ಟಿ ಮತ್ತು ತಂಡದ ಆಯೋಜನೆಯ ಈ ಶಿಬಿರದಲ್ಲಿ ಎಲ್ಲಾ ಕೀಲು ಮತ್ತು ಮೂಳೆರೋಗ ಸಂಬಂಧಿತ ಸಮಸ್ಯೆಗಳಿಗೆ ಉಚಿತ ಸಮಾಲೋಚನೆ, ಉಚಿತ ಫಿಸಿಯೋಥೆರಪಿ ಸಮಾಲೋಚನೆ, ಪ್ರಿಸ್ಕ್ರಿ ಪ್ಷನ್ ಪ್ರಕಾರ ಸೀಮಿತ ಔಷಧಿಗಳ ಉಚಿತ ಪೂರೈಕೆ, ಎಕ್ಸ್ ರೇ ಮತ್ತು ರಕ್ತ ಪರೀಕ್ಷೆ, ಬೆನ್ನು, ಮೊಣಕಾಲು ಮತ್ತು ಸೊಂಟದ ನೋವಿನ ಮೌಲ್ಯಮಾಪನಗಳು, ಚಪ್ಪಟೆ ಪಾದಗಳು, ನಾಕ್ ಮೊಣಕಾಲುಗಳು ಮತ್ತು ಕ್ರೀಡಾ ಗಾಯಗಳಿಗೆ ಆರಂಭಿಕ ಪತ್ತೆ ಮತ್ತು ಚಿಕಿತ್ಸೆ,ಗಾಯ ತಡೆಗಟ್ಟುವಿಕೆ ಸಲಹೆಗಳು ಮತ್ತು ಆಸ್ಡಿಯೋಪೊರೆಸಿಸ್ ಗೆ ಸಂಬಂಧಿಸಿದ ಮೂಳೆ ಆರೋಗ್ಯ ಸಲಹೆ, ಮುರಿತದ ಚಿಕಿತ್ಸೆ ಮತ್ತು ಸಂಧಿವಾತ ನಿರ್ವಹಣೆಗೆ ಸಲಹೆ, ಉಚಿತ ಬೋನ್ ಮಿನರಲ್ ಡೆನ್ಸಿಟಿ ಸ್ಕ್ರೀನಿಂಗ್ ಮುಂತಾದ ಸೇವೆಗಳು ಈ ಶಿಬಿರದಲ್ಲಿ ನೀಡಲಾಯಿತು. ಸುಮಾರು ೧೫೦ ಜನರು ಈ ಶಿಬಿರದ ಉಪಯೋಗ ಪಡೆದರು.